Search
Close this search box.

ಫ್ರೀ ಕರೆಂಟ್: ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಬಂದಿದ್ರು ಇಂಥವರಿಗೆ ನೋಟಿಸ್! ಯಾಕೆ ಗೊತ್ತಾ?

Facebook
Telegram
WhatsApp
LinkedIn

ನಿರೀಕ್ಷೆಗೂ ಮೀರಿ ಸರ್ಕಾರಕ್ಕೆ ಯಶಸ್ಸನ್ನು ತಂದು ಕೊಟ್ಟಿವೆ ಶಕ್ತಿ ಯೋಜನೆಯಿಂದ ಹಿಡಿದು ಗೃಹ ಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ ಹಾಗೂ ಮುಂಬರುವ ಯುವ ನಿಧಿ ಯೋಜನೆ (Yuva Nidhi scheme) ಕೂಡ ಸರ್ಕಾರದ ಮೇಲೆ ಜನರಿಗೆ ಭರವಸೆ ಮೂಡುವಂತೆ ಮಾಡಿವೆ. ಆದರೆ ಈ ಎಲ್ಲ ಯೋಜನೆಗೆ ಒಟ್ಟಾರೆ ಸರ್ಕಾರಕ್ಕೆ ಸಾಕಷ್ಟು ದೊಡ್ಡ ಮೊತ್ತದ ಹಣ ಬೇಕು. ಯೋಜನೆಗಳಿಂದಾಗಿ ರಾಜ್ಯದ ಬೊಕ್ಕಸದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎನ್ನಬಹುದು.

ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ದೊಡ್ಡ ಗೊಂದಲ ಅಂದರೆ ರಾಜ್ಯ ಸರ್ಕಾರ ಈ ಎಲ್ಲ ಯೋಜನೆಗಳನ್ನು ಜಾರಿಗೆ ತಂದಿದೆ ಸರಿ, ಆದರೆ ಆಯಾ ಇಲಾಖೆಗೆ ಸರಿಯಾದ ರೀತಿಯಲ್ಲಿ ಹಣ ಒದಗಿಸುತ್ತಿದೆಯಾ ಎನ್ನುವುದು

ಈ ಹಿಂದೆ ಶಕ್ತಿ ಯೋಜನೆ ಜಾರಿಗೆ ಬಂದಾಗ ಸಾರಿಗೆ ಇಲಾಖೆಗೆ (KSRTC) ಸರ್ಕಾರದಿಂದ ಸರಿಯಾಗಿ ಬರಬೇಕಾಗಿರುವ ಕೋಟ್ಯಂತರ ಹಣ ಸಂದಾಯವಾಗಿಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು ಇದರಿಂದ ಸರಕಾರಿ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಸಿಗುತ್ತಿಲ್ಲ ಎನ್ನಲಾಗಿತ್ತು.

ರಾತ್ರೋ ರಾತ್ರಿ ರೇಷನ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್! ರಾಜ್ಯ ಸರ್ಕಾರದಿಂದ ಭರ್ಜರಿ ಮಹತ್ವದ ನಿರ್ಧಾರ..!

ಗೃಹಣಿಯರಿಗೆ ಸಿಗಬೇಕಾದ ಗೃಹಲಕ್ಷ್ಮಿ ಸಿಕ್ಕಿಲ್ಲಾ ಅಂದ್ರೆ ಈ ಒಂದು ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ 

ಮತ್ತೆ ಇಂತದ್ದೇ ಒಂದು ಚರ್ಚೆ ನಡೆದಿದ್ದು ತುಮಕೂರು ವಿಭಾಗದಲ್ಲಿ ಸರ್ಕಾರದಿಂದ ಬೆಸ್ಕಾಂಗೆ ಹಣ ಸಂದಾಯವಾಗಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಹೌದು ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಜನರಿಗೆ ಉಚಿತ ವಿದ್ಯುತ್‌ (Free Electricity) ಸಿಗುತ್ತಿದೆ.

200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದವರಿಗೆ ಒಂದು ರೂಪಾಯಿ ಕೂಡ ವಿದ್ಯುತ್ ಬಿಲ್ (Zero Electricity Bill) ಭರಿಸುವ ಅಗತ್ಯವಿಲ್ಲ. ಆದರೆ ಇದಕ್ಕಾಗಿ ಬೆಸ್ಕಾಂ ಗೆ ಸರ್ಕಾರ ಹಣ ಒದಗಿಸಬೇಕು.

ಅಷ್ಟೇ ಅಲ್ಲ, ಸರ್ಕಾರಿ ಕಚೇರಿಗಳು ಬಳಸಿದ ವಿದ್ಯುತ್ ಬಿಲ್ಲೇ 760 ಕೋಟಿ ಮೊತ್ತವನ್ನು ಸರ್ಕಾರ ಪಾವತಿ ಮಾಡಿಲ್ಲ ಎನ್ನಲಾಗಿದೆ. 15 ರಿಂದ 20 ವರ್ಷಗಳಿಂದಲೂ ಬೆಸ್ಕಾಂ ಗೆ ಸರ್ಕಾರದಿಂದ ಸಂದಾಯವಾಗಬೇಕಾಗಿದ್ದ ಹಣವು ಕೂಡ ಸಂದಾಯವಾಗಿಲ್ಲ ಎನ್ನುವ ಮಾತು ಇದೆ.

ಇನ್ನು ವಿದ್ಯುತ್ ಬಿಲ್ (current bill) ವಿಚಾರಕ್ಕೆ ಬಂದರೆ ಕೇವಲ ಜನರು ಮಾತ್ರವಲ್ಲ ಸರ್ಕಾರಿ ಸಂಸ್ಥೆಗಳು ಕೂಡ ವಿದ್ಯುತ್ ಬಿಲ್ ಅನ್ನು ಭರಿಸಲೇಬೇಕು. ಆದರೆ ದುರದೃಷ್ಟ ವಿಷಯದ ತುಮಕೂರು ಸರಕಾರಿ ಕಚೇರಿಗಳಲ್ಲಿ (government office) ಬಾಕಿ ಇಟ್ಟುಕೊಂಡ ದೊಡ್ಡ ಮೊತ್ತದ ವಿದ್ಯುತ್ ಬಿಲ್ಲ ಹಣವನ್ನು ಕೂಡಲೇ ಭರಿಸಬೇಕು ಎಂದು ಸರ್ಕಾರಿ ಕಚೇರಿಗೆ ಬೆಸ್ಕಾಂ ನೋಟಿಸ್ (BESCOM notice) ಕಳುಹಿಸಿದೆ ಎನ್ನಲಾಗಿದೆ.

ಯಾವುದೇ ಸಾಮಾನ್ಯ ವ್ಯಕ್ತಿ ಕೂಡ ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ಕಟ್ಟದೇ ಇದ್ದಲ್ಲಿ ಆತನ ಮನೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಲಾಗುತ್ತದೆ. ಅದೇ ರೀತಿ ಸರ್ಕಾರಿ ಕಚೇರಿಯಲ್ಲಿ ಕಳೆದ 15 ರಿಂದ 20 ವರ್ಷಗಳ ಕಾಲ ಬಾಕಿ ಇಟ್ಟುಕೊಂಡಿದ್ದ ಹಣವನ್ನು ಇನ್ನಾದರೂ ಪಾವತಿ ಮಾಡಬೇಕು ಎಂದು ಬೆಸ್ಕಾಂ ನೋಟಿಸ್ ಕಳುಹಿಸಿದೆ.

10th pass jobs 
Apply now
12th pass jobs 
Apply now
Degree pass jobs 
Apply now
Diploma pass jobs
Apply now
Karnataka govt jobs 
Apply now

ಸರ್ಕಾರಿ ಕಚೇರಿಗಳಾದ ಕಂದಾಯ ಇಲಾಖೆ, ಕೃಷಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಶಿಕ್ಷಣ, ಸಣ್ಣ ನೀರಾವರಿ, ನಗರಾಭಿವೃದ್ಧಿ ಲೋಕೋಪಯೋಗಿ, ತೋಟಗಾರಿಕೆ, ಪಶು ಸಂಗೋಪನೆ ಹೀಗೆ ಮೊದಲಾದ ಸರ್ಕಾರಿ ಕಚೇರಿಗಳಿಂದ ಹಣ ಸಂದಾಯವಾಗಬೇಕಿದೆ ಅದಕ್ಕಾಗಿ ಬೆಸ್ಕಾಂ ಗಡುವು ನಿಗದಿಪಡಿಸಿದ್ದು, ಇನ್ನು 15 ದಿನಗಳ ಒಳಗೆ ಎಲ್ಲಾ ಬಾಕಿ ಇರುವ ಕರೆಂಟ್ ಬಿಲ್ ಪಾವತಿ ಮಾಡುವಂತೆ ಇಳಿಸಿದೆ.

ಒಂದು ವೇಳೆ ಈ ಅವಧಿಯಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡದೆ ಇದ್ದಲ್ಲಿ ಸರ್ಕಾರಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ಕೂಡ ಕಡಿತಗೊಳಿಸುವುದಾಗಿ ಬೆಸ್ಕಾಂ ಎಚ್ಚರಿಕೆ ನೀಡಿದೆ. ಹಾಗಾಗಿ ನಿಗದಿತ ಅವಧಿಯ ಒಳಗೆ ಸರ್ಕಾರಿ ಕಚೇರಿಗಳು ಬೆಸ್ಕಾಂ ಗೆ ಸಂದಾಯ ಆಗಬೇಕಾಗಿರುವ ಹಣವನ್ನು ಪಾವತಿ ಮಾಡುತ್ತವೋ ಇಲ್ಲವೋ ಕಾದು ನೋಡಬೇಕು.

Leave a Comment

Trending Results

Request For Post