Search
Close this search box.
Jan dhan account

ಪ್ರಧಾನ ಮಂತ್ರಿ ಜನ್ ಧನ್ ಖಾತೆಯನ್ನು ಹೇಗೆ ತೆರೆಯುವುದು | How to open jan dhan account in Kannada

Facebook
Telegram
WhatsApp
LinkedIn

How to open jan dhan account – ದೇಶದಲ್ಲಿ ಸ್ವಾತಂತ್ರ್ಯ ಬಂದು 70 ವರ್ಷಗಳ ಆದರೂ ಕೂಡಾ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿರದ ಅನೇಕ ಜನರು ನಮ್ಮ ದೇಶದಲ್ಲಿ ಇದ್ದಾರೆ. ಈ ಕಾರಣಕ್ಕಾಗಿಯೇ ದೇಶದಲ್ಲಿ ವಿಪತ್ತು ಸಂಭವಿಸಿದಾಗಲೆಲ್ಲಾ ಬಡ ಜನರಿಗೆ ಸಹಾಯ ತಲುಪಿಸುವುದು ತುಂಬಾ ಕಷ್ಟ ಆಗಿತ್ತು. ಜನ ಧನ್ ಯೋಜನೆ (ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ) ಅನ್ನು ಕೇಂದ್ರ ಸರ್ಕಾರ ಪ್ರಾರಂಭ ಮಾಡಿದರು. ಇದರಿಂದ ಯಾವುದೇ ವಿಪತ್ತಿನ ಸಮಯದಲ್ಲಿ ಪ್ರತಿಯೊಬ್ಬರಿಗೂ ನೇರವಾಗಿ ಸಹಾಯವನ್ನು ತಲುಪಿಸುವ ಉದ್ದೇಶಕ್ಕಾಗಿ. ಈ ಯೋಜನೆಯನ್ನು ಕಳೆದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುತ್ತಾರೆ.

ಪ್ರಧಾನಮಂತ್ರಿ ಜನ್ ಧನ್ ಯೋಜನೆ ಎಂದರೇನು? What is jan dhan account ?

Jan dhan account

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ನು ಕೇಂದ್ರ ಸರ್ಕಾರವು 2014 ರಲ್ಲಿ ಪ್ರಾರಂಭ ಮಾಡಿದರು.  ಈ ಯೋಜನೆಯ ಉದ್ದೇಶವು ದೇಶದ ಎಲ್ಲಾ ನಾಗರಿಕರಿಗೆ ಬ್ಯಾಂಕ್ ಸಂಬಂಧಿತ ಸೌಲಭ್ಯಗಳನ್ನು ನೀಡುವುದು ಇದರ ಉದ್ದೇಶ ಆಗಿತ್ತು. ಅಲ್ಲದೆ, ದೇಶದ ಪ್ರತಿಯೊಬ್ಬ ಪ್ರಜೆ ಅಥವಾ ಕುಟುಂಬದ ಒಬ್ಬ ವ್ಯಕ್ತಿ ಬ್ಯಾಂಕ್ ಖಾತೆ ಅನ್ನು ಹೊಂದಿರಲೇ ಬೇಕು ಖಾತೆ ಹೊಂದಿರುವುದರಿಂದ ಸಬ್ಸಿಡಿಗಳು ಮತ್ತು ಇತರ ಯೋಜನೆಗಳ ಪ್ರಯೋಜನಗಳನ್ನು ಬಡ ಜನರಿಗೆ ಹಣ ಮೂಲಕವೇ ನೇರವಾಗಿ ತಲುಪಿಸುವುದು ಆಗಿದೆ.

ಜನ್ ಧನ್ ಯೋಜನೆಯ ಲಾಭಗಳು| jan dhan account benifits :

  • ಬ್ಯಾಂಕ್ ಸೌಲಭ್ಯಗಳು ದೇಶದ ಎಲ್ಲಾ ಜನರಲ್ಲಿ ತಲುಪುವುದು
  • ಯಾವುದೇ ಕನಿಷ್ಠ ಬ್ಯಾಲೆನ್ಸ್ ಇಲ್ಲದೆ ಕೂಡಾ ಬ್ಯಾಂಕ್ ಖಾತೆ ಹೊಂದಿರುವುದು.
  • ವಿಪತ್ತಿನ ಸಮಯದಲ್ಲಿ ಹಣಕಾಸಿನ ನೆರವನ್ನು ನೇರವಾಗಿ ಬಡ ಜನರ ಬ್ಯಾಂಕ್ ಖಾತೆಗೆ ಕಳಿಸುವುದು.
  • ಸಬ್ಸಿಡಿ ಮತ್ತು ಇತರ ಯೋಜನೆಗಳ ಖಾತೆಗೆ ನೇರವಾಗಿ ಹಣ ಬರುವ ಮೂಲಕ ಭ್ರಷ್ಟಾಚಾರ ಕಡಿಮೆ ಮಾಡುವುದು.
  • ಬ್ಯಾಂಕುಗಳಲ್ಲಿ ಹೆಚ್ಚಿನ ಹಣವನ್ನು ಇಟ್ಟಿರುವುದರಿಂದ ಬ್ಯಾಂಕುಗಳು ಕೂಡಾ ಹೆಚ್ಚು ವಹಿವಾಟು ನಡೆಸುವುದು.

ಯೋಜನೆಯ ಅರ್ಹತೆ ಮತ್ತು ಬೇಕಾಗಿರುವ ದಾಖಲೆಗಳು 

  • ಈ ಖಾತೆ ಒಪೆನ್ ಮಾಡಲು ನೀವು ಭಾರತೀಯ ಪ್ರಜೆಯಾಗಿರಬೇಕು.
  • ಜನ್ ಧನ್ ನಲ್ಲಿ ಖಾತೆ ತೆರೆಯುವ ವ್ಯಕ್ತಿಯು ಬೇರೆ ಯಾವುದೇ ಬ್ಯಾಂಕ್ ಖಾತೆಯನ್ನು ಈಗಾಗಲೇ ಹೊಂದಿರಬಾರದು.
  • ಖಾತೆ ತೆರೆಯಲು ಕನಿಷ್ಠ ವಯಸ್ಸು 10 ವರ್ಷಗಳು, ಗರಿಷ್ಠ ವಯೋಮಿತಿ ಇನ್ನೂ ನಿಗದಿ ಆಗಿಲ್ಲ.
  • ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್,ಓಟರ್ id ಅಥವಾ ಪಾಸ್‌ಪೋರ್ಟ್ ಈ ಯಾವುದೇ ದಾಖಲೆಗಳ ಮೂಲಕ ನೀವು ಜನ್ ಧನ್ ಖಾತೆಯನ್ನು ತೆರೆಯಬಹುದು ಆಗಿದೆ.
  • ಮೊಬೈಲ್ ನಂಬರ್ ನಿಮ್ಮ ಬಳಿ ಇರಬೇಕು.
  • ಪಾಸ್ಪೋರ್ಟ್ ಗಾತ್ರದ ಫೋಟೋ ಒಂದು ಬೇಕು.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಖಾತೆಯನ್ನು ಹೇಗೆ ತೆರೆಯುವುದು | How to open jan dhan account in Kannada :

ಆಫ್‌ಲೈನ್ ಪ್ರಕ್ರಿಯೆ ನೋಡೋಣ ಮೊದಲು :jan dhan account opening offline

ನೀವು ಜನ್ ಧನ್ ಯೋಜನೆಯಡಿ ನಿಮ್ಮ ಖಾತೆಯನ್ನು ತೆರೆಯಲು ನಮಗೆ ಈಗ ಎರಡು ಮಾರ್ಗಗಗಳು ಇವೆ. ನೀವು ಜನ್ ಧನ್ ಯೋಜನೆಯಡಿ ಖಾತೆಗಳನ್ನು ಸರ್ಕಾರಿ ಬ್ಯಾಂಕ್ ಅಥವಾ ಖಾಸಗಿ ಬ್ಯಾಂಕ್‌ಗೆ ಹೋಗಿ ತೆರೆಯಬಹುದು ಆಗಿದೆ. ಹೋಗುವಾಗ ನಿಮ್ಮ ಎಲ್ಲಾ ಅಗತ್ಯ ದಾಖಲೆಗಳ ಜೊತೆ ನಿಮ್ಮ ಫೋಟೋ ಪ್ರತಿಯನ್ನು ಮತ್ತು ಮೂಲ ದಾಖಲೆಗಳನ್ನು ಬ್ಯಾಂಕಿಗೆ ತೆಗೆದುಕೊಂಡು ಹೋಗಿ. ಬ್ಯಾಂಕಿಗೆ ಹೋಗಿ ಅಲ್ಲಿ ನೀವು ಅಲ್ಲಿನ ಸಿಬ್ಬಂದಿ ಬಳಿ ಜನ್ ಧನ್ ಖಾತೆಯ ಫಾರ್ಮ್ ಅನ್ನು ಕೇಳಿ ಪಡೆಯಿರಿ. ಫಾರ್ಮ್ ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ನಿಮ್ಮ ಡಾಕ್ಯುಮೆಂಟ್‌ನ ಪ್ರತಿಯನ್ನು ಲಗತ್ತಿಸಿ. ಈ ರೀತಿಯಾಗಿ ನೀವು ಆಫ್ಲಿನ್ ಮೂಲಕ ಜನ್ ಧನ್ ಖಾತೆಯನ್ನು ತೆರೆಯಬಹುದು.

ಜನ್ ಧನ್ ಯೋಜನೆಯ ಮೂಲಕ, ನೀವು ಮನೆಯಲ್ಲಿ ಕುಳಿತು ಖಾತೆಯನ್ನು ಒನ್ಲೈನ್ ಮೂಲಕ ಕೂಡ ತೆರೆಯಬಹುದು ಅದು ಸಹ ಸಾಧ್ಯವಿದೆ. ಆನ್‌ಲೈನ್‌ನಲ್ಲಿ ಖಾತೆ ತೆರೆಯುವುದು ಹೇಗೆ ಎಂದು ನೋಡೋಣ ಬನ್ನಿ.

ಜನ್ ಧನ್ ಖಾತೆ ತೆರೆಯಲು ಆನ್‌ಲೈನ್ ಪ್ರಕ್ರಿಯೆ ಇಲ್ಲಿದೆ ನೋಡಿ : Jan dhan account opening online

ಮೊದಲನೆಯದಾಗಿ, ನೀವು ಯಾವುದೇ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಮೊದಲು ಭೇಟಿ ನೀಡಬೇಕು ಆಮೇಲೆ ಅದು ಸರ್ಕಾರದಿಂದ ಜನ್ ಧನ್ ಖಾತೆಯನ್ನು ತೆರೆಯಲು ಅಧಿಕಾರ ಹೊಂದಿರುತ್ತದೆ. ವೆಬ್ಸೈಟ್ ಇಲ್ಲಿದೆ ನೋಡಿ https://www.pmjdy.gov.in/  ಸೈಟ್ಗೆ ಹೋದ ನಂತರ, ಖಾತೆ ತೆರೆಯುವ ಆಯ್ಕೆಯನ್ನು ನೀವು ನೋಡುತ್ತೀರ ಅಲ್ಲಿ ಕ್ಲಿಕ್ ಮಾಡಿ. ನೀವು ಮೊದಲು ಭಾಷೆಯನ್ನು ಆಯ್ಕೆ ಮಾಡಬೇಕು.ಖಾತೆ ತೆರೆಯುವ  ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು.

ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಸಂಪೂರ್ಣವಾಗಿ ಭರ್ತಿ ಮಾಡಿ ನಂತರ ನಿಮ್ಮ ದಾಖಲೆಗಳ ಪ್ರತಿಯನ್ನು ಫಾರ್ಮ್ ಹೊಂದಿಗೆ ಲಗತ್ತಿಸಿ. ಅದರ ನಂತರ ನಿಮ್ಮ ಹತ್ತಿರದ ಬ್ಯಾಂಕ್‌ಗೆ ಹೋಗಿ ನಿಮ್ಮ ಫಾರ್ಮ್ ಅನ್ನು ಸಲ್ಲಿಸಬೇಕು. ಈ ರೀತಿಯಾಗಿ ನಿಮ್ಮ ಖಾತೆಯನ್ನು ಜನ್ ಧನ್ ಖಾತೆಯನ್ನು ತೆರೆಯಬಹುದು.

ಜನ್ ಧನ್ ಖಾತೆಯ ಬಗ್ಗೆ ನಿಮಗೆ ಇರುವ ಪ್ರಶ್ನೆಗಳು :

ಜನ್ ಧನ್ ಯೋಜನೆ ಖಾತೆ ತೆರೆಯುವ ಫಾರ್ಮ್ ಆನ್‌ಲೈನ್‌ನಲ್ಲಿ ಲಭ್ಯ ಇದೆಯೇ – ಹೌದು, ಜನ್ ಧನ್ ಖಾತೆ ಫಾರ್ಮ್ ಅನ್ನು ನೀವು ಆನ್‌ಲೈನ್‌ನಲ್ಲಿ ಪಡೆಯಬಹುದು. ಈ ಫಾರ್ಮ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯ ಇರುತ್ತದೆ.

ಜನ್ ಧನ್ ಖಾತೆ ಯೋಜನೆ ಯಾವಾಗ ಆರಂಭ ಆಯಿತು – ಈ ಯೋಜನೆ 2014 ರಿಂದ ಜಾರಿಯಲ್ಲಿ ಇದೆ ಮತ್ತು ಅಂಕಿಅಂಶಗಳ ಪ್ರಕಾರ ಕೋಟ್ಯಾಂತರ ಜನ್ ಧನ್ ಖಾತೆಯನ್ನು ಈಗಾಗಲೇ ತೆರೆಯಲಾಗಿದೆ.

ಜನ್ ಧನ್ ಖಾತೆಯನ್ನು ಯಾವ ಬ್ಯಾಂಕಿನಲ್ಲಿ ನಾವು ತೆರೆಯಬಹುದು ಆಗಿದೆ? – ಯಾವುದೇ ಬ್ಯಾಂಕ್ ಗಳಲ್ಲಿ ಜನ್ ಧನ್ ಖಾತೆ ತೆರೆಯಬಹುದು ಆಗಿದೆ. ಈ ಖಾತೆಯನ್ನು ಶೂನ್ಯ ಬ್ಯಾಲೆನ್ಸ್‌ ನಲ್ಲಿಯೇ ತೆರೆಯಬಹುದು ಆಗಿದೆ.

Leave a Comment

Trending Results

Request For Post